ಸರಜೂ ಕಾಟ್ಕರ್ ಇವರು ೧೯೫೩ ಅಗಸ್ಟ ೧೪ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್.ಏ. ಪದವಿ ಪಡೆದರು. ಅನಂತರ “ಕನ್ನಡ ಮರಾಠಿ ದಲಿತ ಸಾಹಿತ್ಯ, ಒಂದು ತೌಲನಿಕ ಅಧ್ಯಯನ”ದ ಬಗೆಗೆ ಮಹಾಪ್ರಬಂಧ ರಚಿಸಿ ಪಿ.ಎಚ್‍ಡಿ. ಪದವಿ ಸಂಪಾದಿಸಿದರು. == ಉದ್ಯೋಗ == ೧೯೭೫ರಿಂದ ೧೯೮೦ರವರೆಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಬಳಿಕ ೧೯೮೧ರಿಂದ ಇಂಡಿಯನ್ ಎಕ್ಸಪ್ರೆಸ್ ಪತ್ರಿಕಾಬಳಗದ ಸುದ್ದಿಗಾರರಾಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. == ಸಾಹಿತ್ಯ == ಸರಜೂ ಕಾಟ್ಕರರು ಒಂಬತ್ತು ಕಾವ್ಯಸಂಕಲನಗಳನ್ನು, ಒಂದು ಕಾದಂಬರಿಯನ್ನು, ಐದು ವೈಚಾರಿಕ ಕೃತಿಗಳನ್ನು, ಒಂದು ನಾಟಕ, ಒಂದು ಪ್ರವಾಸಕಥನ ಹಾಗು ಮೂರು ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಕೆಲವು ಕೃತಿಗಳು: ಮ್ಯಾನಿಫೆಸ್ಟೊ ಏಕಾಂತದ ಮನುಷ್ಯ ಹಸಿದ ನೆಲ ಗಾಂಧಿ ಸಿಕ್ಕ ಸೂರ್ಯ ಅವ್ವ == ಸನ್ಮಾನ == ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೧ನೆಯ ಸಾಲಿನ ಗೌರವ ಪ್ರಶಸ್ತಿ ಇವರಿಗೆ ಲಭಿಸಿದೆ. ೧೯೮೮ರಿಂದ ೧೯೯೮ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.